ಮೆಂತೆ ಗಂಜಿ ತುಳುನಾಡಿನ ಒಂದು ಆಹಾರ. ಸಾಮಾನ್ಯವಾಗಿ ಆಟಿ (ಆಷಾಢ) ತಿಂಗಳಿನ ಅಮವಾಸ್ಯೆಯಂದು ಮೆಂತೆ ಗಂಜಿ ಮಾಡಿ ಸೇವಿಸುವ ಕ್ರಮವಿದೆ. ಔಷಧಿಯಾಗಿ ಸೇವಿಸುವ ಆಟಿ ಅಮವಾಸ್ಯೆಯ ಕಷಾಯವು ಶರೀರವನ್ನು ಉಷ್ಣ ಮಾಡುತ್ತದೆ ಇದನ್ನು ತಡೆಯಲು ಮೆಂತೆ ಗಂಜಿಯನ್ನು ಆ ಬಳಿಕ ಸೇವಿಸಲಾಗುತ್ತದೆ. ಆಟಿ ಅಮವಾಸ್ಯೆ ಮಾತ್ರವಲ್ಲದೆ ಇತರ ದಿನಗಳಲ್ಲೂ ಮೆಂತೆ ಗಂಜಿ ಸೇವಿಸುತ್ತಾರೆ.ಇದೊಂದು ಪೌಷ್ಠಿಕಾಂಶಭರಿತ ಆಹಾರ. == ಬೇರೆ ಭಾಷೆಗಳಲ್ಲಿ == ತುಳು - ಮೆತ್ತೆದ ಗಂಜಿ ಇಂಗ್ಲಿಷ್ - ಫೆನುಗ್ರೀಕ್ ಪೋರಿಡ್ಜ್ ಮಲಯಾಳಂ - ಉಲುವ ಕಂಜಿ/ಕರ್ಕಿಡಕ ಕಂಜಿ ಕೊಂಕಣಿ - ಅಟ್ವಲ್ == ಮೆಂತೆ ಗಂಜಿ ಮಾಡುವ ವಿಧಾನ == ಸ್ವಲ್ಪ ಅಕ್ಕಿಯೊಂದಿಗೆ ಒಂದು ಚಮಚದಷ್ಟು ಮೆಂತೆ ಕಾಳುಗಳನ್ನು ಬೇಯಿಸಿ, ರುಬ್ಬಿದ ತೆಂಗಿನಕಾಯಿ ಮಿಶ್ರಣ, ಉಪ್ಪು ಸೇರಿಸಬಹುದು. ಕೆಲವೊಂದು ವಿಧಾನದಲ್ಲಿ ಬೆಲ್ಲವನ್ನು ಸೇರಿಸುವ ಕ್ರಮವೂ ಇದೆ. == ಮೆಂತೆ ಗಂಜಿ ಏಕೆ ಮಾಡುತ್ತಾರೆ? == ಹಾಲೆ ಮರದ ತೊಗಟೆಯಿಂದ ತಯಾರಿಸಿದ ಕಷಾಯವು ಹೆಚ್ಚು ಕಹಿಯಾಗಿರುವುದರಿಂದ ಕಷಾಯವನ್ನು ಸೇವಿಸಿದ ನಂತರ ಬೆಲ್ಲ/ಸಕ್ಕರೆಯನ್ನು ನೀಡಿ ನಂತರ ಮೆಂತೆ ಗಂಜಿಯನ್ನು ಸೇವಿಸುವ ಸಂಪ್ರದಾಯವಿದೆ. ಇದು ದೇಹವನ್ನು ತಂಪುಗೊಳಿಸುತ್ತದೆ ಎಂಬುದು ಇದರ ಹಿಂದಿನ ನಂಬಿಕೆ. ಕಹಿಯನ್ನು ಎದುರಿಸಲು, ತುಳುನಾಡಿನ ಜನರು ಬೆಲ್ಲವನ್ನು ಸೇವಿಸುತ್ತಾರೆ ಮತ್ತು ದೇಹದ ಉಷ್ಣತೆಯನ್ನು ಹೋಗಲಾಡಿಸಲು, ಖಾಲಿ ಹೊಟ್ಟೆಯಲ್ಲಿ ಕಷಾಯವನ್ನು ಸೇವಿಸಿದ ನಂತರ ಮೆಂತೆ ಗಂಜಿಯನ್ನು ಸೇವಿಸುತ್ತಾರೆ. == ಪೌಷ್ಠಿಕಾಂಶಗಳು == == ಉಲ್ಲೇಖ ==